ಕರ್ನಾಟಕ ಸರ್ಕಾರ | Government of Karnataka

logo
ಸಣ್ಣ ನೀರಾವರಿ ಮತ್ತು ಅಂತರ್ಜಲ ಆಭಿವೃದ್ದಿ ಇಲಾಖೆ

ಅಂತರ್ಜಲ ನಿರ್ದೇಶನಾಲಯ

ಕರ್ನಾಟಕ ಅಂತರ್ಜಲ ಪ್ರಾಧಿಕಾರ

GWA
We never know the worth of Water till the well is Dry. Water Covers 2/3 of the surface of the Earth but Only 0.002% is Drinkable!!! Either Rich or Poor; Everyone needs Water. If you find a Water leakage Anywhere, try to stop it. Be the First to Change. Save Water now. Nature will Save You.

ಪೀಠಿಕೆ

     ರಾಜ್ಯದಲ್ಲಿ ಅಂತರ್ಜಲ ಅಭಿವೃದ್ಧಿ, ಸದ್ಭಳಕೆ ಹಾಗೂ ಸಂರಕ್ಷಣೆಗಾಗಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಅಂತರ್ಜಲ ವಿಭಾಗವು ಒಂದು ಅವಿಭಾಜ್ಯ ಅಂಗವಾಗಿ 1966 ರಿಂದಲೂ ಅಂತರ್ಜಲ ಸ್ಥಿರ ಜಲಮಟ್ಟದ ದತ್ತಾಂಶವನ್ನು ಸಂಗ್ರಹಿಸಲಾಗುತ್ತಿದೆ. ಕೊಳವೆಬಾವಿ ಕೊರೆಯಲು ತಾಂತ್ರಿಕ ಸಲಹೆ, ಅಂತರ್ಜಲ ಮೌಲೀಕರಣ ಮತ್ತು ಇತರೆ ಕಾರ್ಯಚಟುವಟಿಕೆಗಳೊಂದಿಗೆ ಅಂತರ್ಜಲ ವಿಭಾಗವು ಕಾರ್ಯ ನಿರ್ವಹಿಸುತ್ತಿರುತ್ತದೆ. ರಾಜ್ಯ ಸರ್ಕಾರವು ಅಂತರ್ಜಲದ ಮಹತ್ವವನ್ನು ಅರಿತು ಅಂತರ್ಜಲ ಅಭಿವೃದ್ಧಿ ಮತ್ತು ಸದ್ಬಳಕೆಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿದ್ದ ಅಂತರ್ಜಲ ವಿಭಾಗವನ್ನು ಪ್ರತ್ಯೇಕಿಸಿ ಸರ್ಕಾರದ ಆದೇಶ ಸಂಖ್ಯೆ: ಸನೀಇ 13 ಅಜಅ 2013 ಬೆಂಗಳೂರು, ದಿನಾಂಕ:23.11.2013ರನ್ವಯ ಸಿಬ್ಬಂದಿಯೊಂದಿಗೆ ಹೊಸದಾಗಿ ಅಂತರ್ಜಲ ನಿರ್ದೇಶನಾಲಯವನ್ನು ಸ್ಥಾಪಿಸಲಾಗಿರುತ್ತದೆ. ಪ್ರಸ್ತುತ ಅಂತರ್ಜಲ ನಿರ್ದೇಶನಾಲಯವು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

     ಹೊಸದಾಗಿ ಅಂತರ್ಜಲ ನಿರ್ದೇಶನಾಲಯ ಸ್ಥಾಪನೆಯಾದ ನಂತರ ಕಾರ್ಯನಿರ್ವಹಿಸುತ್ತಿದ್ದ 17 ಜಿಲ್ಲಾ ಕಚೇರಿಗಳು ಜಿಲ್ಲಾ ವಲಯದಿಂದ ರಾಜ್ಯ ವಲಯಕ್ಕೆ ವರ್ಗಾವಣೆಗೊಂಡು ಲೆಕ್ಕ ಶೀರ್ಷಿಕೆ 2702-02-005-0-15 ಯಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಾಕಿ ಉಳಿದಿದ್ದ 13 ಜಿಲ್ಲೆಗಳಲ್ಲಿನ ಅಂತರ್ಜಲ ಕಚೇರಿಗಳನ್ನು 2017-18ನೇ ಸಾಲಿನಲ್ಲಿ ಹೊಸದಾಗಿ ಪ್ರಾರಂಭಿಸುವುದರೊಂದಿಗೆ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಅಂತರ್ಜಲ ಕಚೇರಿಗಳು ಸ್ಥಾಪಿತವಾಗಿ ರಾಜ್ಯವಲಯದಡಿ ಕಾರ್ಯನಿರ್ವಹಿಸುತ್ತಿರುತ್ತವೆ.


ಅಂತರ್ಜಲ ನಿರ್ದೇಶನಾಲಯದ ರಚನಾ ನಕ್ಷೆ :


Organisation Chart
 

Website Content Managed by Groundwater Directorate, Government of Karnataka. Designed, Developed and Hosted by National Informatics Centre( NIC ).
Questions regarding content or presentation may be mail to: gwdkar[at]gmail[dot]com
Last Updated: 26/09/2018