ಕರ್ನಾಟಕ ಸರ್ಕಾರ | Government of Karnataka

logo
ಸಣ್ಣ ನೀರಾವರಿ ಮತ್ತು ಅಂತರ್ಜಲ ಆಭಿವೃದ್ದಿ ಇಲಾಖೆ

ಅಂತರ್ಜಲ ನಿರ್ದೇಶನಾಲಯ

ಕರ್ನಾಟಕ ಅಂತರ್ಜಲ ಪ್ರಾಧಿಕಾರ

GWA
We never know the worth of Water till the well is Dry. Water Covers 2/3 of the surface of the Earth but Only 0.002% is Drinkable!!! Either Rich or Poor; Everyone needs Water. If you find a Water leakage Anywhere, try to stop it. Be the First to Change. Save Water now. Nature will Save You.

ಅಂತರ್ಜಲ ನಿರ್ದೇಶನಾಲಯದ ಕಾರ್ಯ ಚಟುವಟಿಕೆಗಳು

 1. ಅಧ್ಯಯನ ಕೊಳವೆಬಾವಿಗಳ ಜಲಮಟ್ಟ ಮಾಪನ :
  1. ರಾಜ್ಯದ ಒಟ್ಟು 1784 ಅಧ್ಯಯನ ಬಾವಿ / ಕೊಳವೆಬಾವಿಗಳಿಂದ ಪ್ರತಿ ಮಾಹೆಯಾನ ಅಂತರ್ಜಲ ಸ್ಥಿರ ಜಲಮಟ್ಟವನ್ನು (Static water level) ದಾಖಲಿಸುತ್ತಿದ್ದು, ಅದರಂತೆ ರಾಜ್ಯದ ಮಾಹಿತಿಯನ್ನು ಕ್ರೂಢೀಕರಿಸಿ ಜಿಲ್ಲಾವಾರು/ತಾಲ್ಲೂಕುವಾರು ಅಂತರ್ಜಲ ಮಟ್ಟದ ದತ್ತಾಂಶವನ್ನು ವಿವಿಧ ಅನುಷ್ಠಾನ ಇಲಾಖೆಗಳಿಗೆ ಒದಗಿಸುತ್ತಿದೆ.
  2. ಈ ಮಾಹಿತಿಯನ್ನು ಸರ್ಕಾರೇತರ ಸಂಸ್ಥೆಗಳು / Institutions ಗಳಿಂದ ತೆಗೆದುಕೊಳ್ಳಲಾಗುವ ಅಧ್ಯಯನಕ್ಕಾಗಿ ಒದಗಿಸಲಾಗುತ್ತಿದೆ.
  3. ಸರ್ಕಾರದಿಂದ ಬರಪೀಡಿತ ಪ್ರದೇಶ / ತಾಲ್ಲೂಕುಗಳೆಂದು ಘೋಷಿಲಾಗುವ ಸಮಯದಲ್ಲಿ ಈ ಮಾಹಿತಿಯು ಅತ್ಯಂತ ಪ್ರಮುಖ ದತ್ತಾಂಶವಾಗಿರುತ್ತದೆ.
  4. ಬರಪೀಡಿತ ತಾಲ್ಲೂಕುಗಳಲ್ಲಿ ಸರ್ಕಾರದಿಂದ ಹಮ್ಮಿಕೊಳ್ಳಲಾಗುವ ಕುಡಿಯುವ ನೀರು/ ಎಸ್ ಸಿಪಿ/ ಎಸ್ ಟಿಪಿ ಯೋಜನಾ ಕಾರ್ಯಕ್ರಮಗಳಡಿಯಲ್ಲಿ ಕೊರೆಯಲಾಗುವ ಕೊಳವೆಬಾವಿ ಸ್ಥಳಾಯ್ಕೆಗೆ ಅತ್ಯಂತ ಪ್ರಮುಖವಾದ ಮಾಹಿತಿಯಾಗಿರುತ್ತದೆ.
  5. ಕೇಂದ್ರೀಯ ಅಂತರ್ಜಲ ಮಂಡಳಿಯವರ ಸಹಯೋಗದೊಂದಿಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಕೈಗೊಳ್ಳುವ ರಾಜ್ಯದ ಅಂತರ್ಜಲ ಸಂಪನ್ಮೂಲದ ಮೌಲೀಕರಣಕ್ಕೆ ಈ ದತ್ತಾಂಶವು ಪ್ರಮುಖ ದತ್ತಾಂಶವಾಗಿರುತ್ತದೆ. ಇನ್ನಿತರೆ ಮಾಹಿತಿಗಳಾದ ಕೊಳವೆಬಾವಿ ಗಣತಿ ವಿವರ, ಬೆಳೆಯ ನೀರಿನ ಅವಶ್ಯಕತೆಯ ವಿವರ (Crop Water Requirement) ಕಾಲುವೆ ವಿವರ (Canal Details) ಗಳನ್ನು ಸಹ ಸಂಗ್ರಹಿಸಿ ಇವುಗಳ ಆಧಾರದ ಮೇಲೆ ವರದಿಯನ್ನು ತಯಾರಿಸಲಾಗುವುದು.
  6. ಅಂತರ್ಜಲ ಸಂಪನ್ಮೂಲ ಮೌಲೀಕರಣ ವರದಿಯನುಸಾರ ಅತಿಬಳಕೆ, ಕ್ಲಿಷ್ಟಕರ, ಅರೆಕ್ಲಿಷ್ಟಕರ, ಸುರಕ್ಷಿತ ಮತ್ತು ಮಿಶ್ರ ವರ್ಗಗಳೆಂದು ವರ್ಗೀಕರಿಸಲಾಗಿರುತ್ತದೆ. ಅತಿಬಳಕೆ ಪ್ರದೇಶಗಳಲ್ಲಿ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011 ಹಾಗೂ ನಿಯಮಾವಳಿ 2012 ರನ್ವಯ ಅಂತರ್ಜಲದ ಅತಿಬಳಕೆಯನ್ನು ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿಗಳನ್ನು ರಚಿಸಲಾಗಿರುತ್ತದೆ.
 2. ನೀರಿನ ಮಾದರಿಗಳ ಸಂಗ್ರಹಣೆ :

       ಅಂತರ್ಜಲ ನಿರ್ದೇಶನಾಲಯದ ಬಾವಿ / ಕೊಳವೆಬಾವಿಗಳಿಂದ ಹಿಂಗಾರು ಮತ್ತು ಮುಂಗಾರು ಋತುಮಾನಗಳಲ್ಲಿ ಸಂಗ್ರಹಿಸಲಾಗುವ ನೀರಿನ ಮಾದರಿಗಳನ್ನು ಇಲಾಖೆಯ ರಸಾಯನ ಪ್ರಯೋಗಶಾಲೆಗಳಲ್ಲಿ ವಿಶ್ಲೇಷಿಸಿ ವರದಿಯನ್ನು ತಯಾರಿಸಿ ಅನುಷ್ಠಾನ ಇಲಾಖೆಗಳಿಗೆ ನೀಡಲಾಗುತ್ತಿದೆ. ಪ್ರಸ್ತುತ 2015ರ ಅಂತರ್ಜಲ ಗುಣಮಟ್ಟ ವಿಶ್ಲೇಷಣೆಯ ಪಲಿತಾಂಶವನ್ನು ಆಧರಿಸಿ Karnataka State Groundwater Quality Evaluation ಎಂಬ ಶೀರ್ಷಿಕೆವುಳ್ಳ ವರದಿಯನ್ನು ಹೊರತರಲಾಗಿರುತ್ತದೆ.

 3. ಕಿರು ಜಲಾನಯನ ಪ್ರದೇಶ ಸಮೀಕ್ಷೆ/ ವಿಶೇಷ ಅಧ್ಯಯನ:

       ಜಿಲ್ಲಾ ಕಚೇರಿಗಳಿಂದ ಕಿರು ಜಲಾಯನಯ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಅಂತಹ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ ಅಲ್ಲಿನ ಅಂತರ್ಜಲದ ಸ್ಥಿತಿಗತಿ ತಿಳಿದು ವರದಿ ತಯಾರಿಸಲಾಗುತ್ತಿದೆ.

 4. ವಿಶೇಷ ಅಧ್ಯಯನ :

       ನಗರ ಪ್ರದೇಶ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕ ನೀರು ಸರಬರಾಜು ಮೂಲಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಿಸಿ ವರದಿ ತಯಾರಿಸುವುದು, ನೀರಾವರಿ ಪ್ರದೇಶಗಳಲ್ಲಿ ಅಂತರ್ಜಲ ಬಳಕೆಯ ಬಗ್ಗೆ ಹಾಗೂ ಸಮುದ್ರ ತೀರ ಪ್ರದೇಶಗಳಲ್ಲಿ ಉಪ್ಪು ನೀರು ಸೇರುವಿಕೆಯ ಬಗ್ಗೆ ಅಧ್ಯಯನಗಳನ್ನು ಕೈಗೊಳ್ಳಲಾಗುತ್ತಿದೆ.

 5. ಕೊಳವೆಬಾವಿಗಳ ಸ್ಥಳಾಯ್ಕೆ :

       ಜಿಲ್ಲಾ ಅಂತರ್ಜಲ ಕಚೇರಿಗಳಿಗೆ ಸರ್ಕಾರ / ಸರ್ಕಾರೇತರ ಮತ್ತು ಸಾರ್ವಜನಿಕರಿಂದ ಕೊಳವೆಬಾವಿ ಸ್ಥಳಾಯ್ಕೆಗೆ ಸ್ವೀಕರಿಸಲ್ಪಡುವ ಅರ್ಜಿಗಳಿಗೆ, ಆಯಾ ಪ್ರದೇಶದಲ್ಲಿ ಭೂ ವೈಜ್ಞಾನಿಕ ಸಮೀಕ್ಷೆ ನಡೆಸಿ, ಸಮೀಕ್ಷೆಯ ಆಧಾರದ ಮೇಲೆ ತಾಂತ್ರಿಕ ಸಲಹೆ ನೀಡಲಾಗುತ್ತಿದೆ.

       ಸಮಸ್ಯಾತ್ಮಕ ಪ್ರದೇಶಗಳಲ್ಲಿ ಕೊಳವೆಬಾವಿ ಸ್ಥಳಾಯ್ಕೆಯನ್ನು ಭೂಭೌತ ಉಪಕರಣದಿಂದ ಸಮೀಕ್ಷೆ ನಡೆಸಿ ಅಂತರ್ಜಲದ ಲಭ್ಯತೆಯನ್ನು ಅಂದಾಜಿಸಿ ಸಲಹೆ ನೀಡಲಾಗುತ್ತಿದೆ. ಈ ಸಮೀಕ್ಷೆಯನ್ನು ಹೆಚ್ಚಾಗಿ ಬರಪೀಡಿತ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ.

 6. ಅಂತರ್ಜಲ ಮರು ಪೂರೈಕೆ ರಚನೆಗಳ ಸ್ಥಳಾಯ್ಕೆ :

       ಮಂಗಾರು ಮತ್ತು ಹಿಂಗಾರು ಮಳೆಯ ಅಭಾವದಿಂದ ಅಂತರ್ಜಲ ಮಟ್ಟವು ಗಣನೀಯವಾಗಿ ಕುಸಿಯುತ್ತಿದ್ದು, ಅಂತರ್ಜಲ ಮಟ್ಟವನ್ನು ವೃದ್ಧಿಸಲು ಸರ್ಕಾರವು ವಿವಿಧ ಇಲಾಖೆಗಳ ಮುಖಾಂತರ ಅಂತರ್ಜಲ ಕೃತಕ ಮರುಪೂರೈಕೆ ರಚನೆಗಳ ನಿರ್ಮಾಣವನ್ನು ಕೈಗೊಳ್ಳುತ್ತಿದೆ. ಈ ರಚನೆಗಳನ್ನು ನಿರ್ಮಿಸಲು ಬೇಕಾಗುವ ಸೂಕ್ತ ಸ್ಥಳಗಳನ್ನು ಸ್ಥಳಾಯ್ಕೆ ಮಾಡಲಾಗುತ್ತಿದೆ.

 7. ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012ರ ಅನುಷ್ಠಾನ :

       ಅಂತರ್ಜಲವನ್ನು ವಿವೇಚನಾರಹಿತವಾಗಿ ಬಳಸುತ್ತಿರುವುದರಿಂದ ಅಂತರ್ಜಲದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದನ್ನು ಹಾಗೂ ಅಂತರ್ಜಲ ಬಳಕೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012ನ್ನು ಜಾರಿಗೆ ತರಲಾಗಿದೆ. ಈ ವಿಧೇಯಕವನ್ನು ಅನುಷ್ಠಾನಗೊಳಿಸಲು ಕಾರ್ಯನಿರ್ವಹಿಸಲು ಅನುವಾಗುವಂತೆ 19 ಸದಸ್ಯರನ್ನೊಳಗೊಂಡಂತೆ ಪ್ರಾಧಿಕಾರವನ್ನು ರಚಿಸಲಾಗಿದೆ.

       ಪ್ರಾಧಿಕಾರಕ್ಕೆ ಸರ್ಕಾರದ ಕಾರ್ಯದರ್ಶಿಗಳು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಇವರು ಅಧ್ಯಕ್ಷರಾಗಿದ್ದು, ನಿರ್ದೇಶಕರು, ಅಂತರ್ಜಲ ನಿರ್ದೇಶನಾಲಯ ಇವರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

       ಸದರಿ ಅಧಿನಿಯಮವನ್ನು ಅನುಷ್ಠಾನಗೊಳಿಸಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 8 ಸದಸ್ಯರಿರುವ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಿ ಆಯಾ ಜಿಲ್ಲೆಗೆ ಸಂಬಂಧಿಸಿದ ಅಂತರ್ಜಲ ಕಚೇರಿಯ ಹಿರಿಯ ಭೂವಿಜ್ಞಾನಿಯವರನ್ನು ಸದಸ್ಯ ಕಾರ್ಯದರ್ಶಿಗಳನ್ನಾಗಿಸಿ ಸಮಿತಿಯನ್ನು ರಚಿಸಲಾಗಿದೆ.

 

Website Content Managed by Groundwater Directorate, Government of Karnataka. Designed, Developed and Hosted by National Informatics Centre( NIC ).
Questions regarding content or presentation may be mail to: gwdkar[at]gmail[dot]com
Last Updated: 26/09/2018